Anandamayage chinmayage
Anandamayage chinmayage shreemannArAyaNage Arati ettirE
vEdava tandu beTTava hottu dharaNiya sAdhisi kambhadi bandavage
bhUdAnava kELi nrupana samharisida AdimUrutigE Arati ettirE || Anandamayage ||
induvadane kUDi aDaviya charisi nanda gOkuladi nalidavage
mandagamaneyara munde nirvANadi ninda mUrutige Arati ettirE || Anandamayage ||
turagavanEri daityara sILi sujanara poreva mangaLa hayavadananige
varadayAdavagiri Adi nArAyaNa charaNakamalake Arati ettirE || Anandamayage |
ದೇವರನಾಮ
ಆನಂದಮಯಗೆ ಚಿನ್ಮಯಗೆ
ಶ್ರೀಮನ್ನಾರಾಯಣಗೆ ಆರತಿ ಎತ್ತಿರೇ || ಆನಂದಮಯಗೆ ||
ವೇದವ ತಂದು ಬೆಟ್ಟವ ಹೊತ್ತು ಧರಣಿಯ
ಸಾಧಿಸಿ ಕಂಭದಿ ಬಂದವಗೆ
ಭೂದಾನವ ಕೇಳಿ ನೃಪನ ಸಂಹರಿಸಿದ
ಆದಿಮೂರುತಿಗೆ ಆರತಿ ಎತ್ತಿರೇ || ಆನಂದಮಯಗೆ ||
ಇಂದುವದನೆ ಕೂಡಿ ಅಡವಿಯ ಚರಿಸಿ
ನಂದಗೋಕುಲದಿ ನಲಿದವಗೆ
ಮಂದಗಮನೆಯರ ಮುಂದೆ ನಿರ್ವಾಣದಿ
ನಿಂದ ಮೂರುತಿಗೆ ಆರತಿ ಎತ್ತಿರೇ || ಆನಂದಮಯಗೆ ||
ತುರಗವನೇರಿ ದೈತ್ಯರ ಸೀಳಿ ಸುಜನರ
ಪೊರೆವ ಮಂಗಳ ಹಯವದನನಿಗೆ
ವರದಯಾದವಗಿರಿ ಆದಿನಾರಾಯಣ
ಚರಣಕಮಲಕೆ ಆರತಿ ಎತ್ತಿರೇ || ಆನಂದಮಯಗೆ ||