baagilanu teredu
Raaga: aThaana; Taala: aTTa
Pallavi
baagilanu teredu sEveyanu koDu hariye
koogidaru dhvani kElalillavE narahariyE
Charanas
paramapadadoLage viShadharana talpadali nee
sirisahita kSheeravaarudhiyoLiralu
kariraaja kaShTadali aadimoola endu
kareyalaakShaNa bandu odagideyO narahariyE 1
kaDukOpadali khaLanu khaDugavanu hididu
ninnoDeya ellihanu endu moreyE
druDha bhakutiyali shishuvu biDade ninnanu bhajise
saDagaradi kambhadindoDedeyO narahariyE 2
yamasutana raaNige akShayavasanavanitte
samayadali ajamiLana porede
samayaasamayavunTe bhaktavatsala ninage
kamalaakSha kaagineleyaadi kEshavane 3
------------------------------------------------------------------
ರಾಗ: ಅಠಾನ; ತಾಳ: ಅಟ್ಟ
ಪಲ್ಲವಿ
ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ
ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೆ
ಚರಣಾಸ್
ಪರಮಪದದೊಳಗೆ ವಿಷಧಾರಣ ತಲ್ಪದಲಿ ನೀ
ಸಿರಿಸಹಿತ ಕ್ಷೀರವಾರೂಧಿಯೊಳಿರಲು
ಕರಿರಾಜ ಕಷ್ಟದಲಿ ಆದಿಮೂಲ ಎಂದು
ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೆ 1
ಕಾಡುಕೋಪದಲಿ ಖಳನು ಖಡುಗವನು ಹಿಡಿದು
ನಿನ್ನೊಡೆಯ ಎಲ್ಲಿಹನು ಎಂದು ಮೊರೆಯೆ
ದೃಢ ಭಕುತಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ
ಸಡಗರದಿ ಕಂಭದಿಂದೊದೆದೆಯೊ ನರಹರಿಯೆ 2
ಯಮಸುತನ ರಾಣಿಗೆ ಅಕ್ಷಯವಸಾನವನೀತ್ಟೆ
ಸಮಯದಲಿ ಅಜಾಮಿಳನ ಪೊರೆದೆ
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿ ಕೇಶವನೆ 3